VACATION TRAINING 2017-18

DRG TRAINING DETAILS


MSCHS Nirchal: MAHAJANA

MSCHS Nirchal: MAHAJANA


‘ಹಿರಿಮೆ - ಉತ್ಸವ’- 2017

Posted: 29 Mar 2017 04:34 AM PDT



"ವಿದ್ಯಾರ್ಥಿಗಳಲ್ಲಿ ಓದುವ, ಆಡುವ ಅಭ್ಯಾಸ ಕಡಿಮೆಯಾಗುತ್ತಿದೆ. ಶಾಲಾ ದಿನಗಳಲ್ಲಿ ಮಕ್ಕಳ ಮನಸ್ಸು ಸರ್ವಾಂಗೀಣ ವಿಕಾಸ ಹೊಂದಬೇಕು. ಇದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಹಿರಿಮೆ ಅಂತಹ ಒಂದು ಚಟುವಟಿಕೆ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಬೆಳೆಯಬೇಕಾದ ಶಾಲಾ ದಿನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು." ಎಂದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್ ವೆಂಕಟರಾಜ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ 'ಹಿರಿಮೆ - ಉತ್ಸವ'ದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕುಂಬಳೆ ಬಿ.ಆರ್.ಸಿ ಯ ಸೀಮಂತಿನಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಮತ್ತು ಕುಂಬಳೆ ಬಿ.ಆರ್.ಸಿ ಯ ರೋಜಾ ಟೀಚರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಶಾಲಾ ಶಿಕ್ಷಕ ತಲೆಂಗಳ ಕೃಷ್ಣಪ್ರಸಾದ ಸ್ವಾಗತಿಸಿದರು. ಶಿಕ್ಷಕ ಅವಿನಾಶ ಕಾರಂತ ಎಂ. ವಂದಿಸಿದರು. ಹಿರಿಯ ಶಿಕ್ಷಕ ಎಚ್.ಶಿವಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಸ್ತು ಪ್ರದರ್ಶನ ಸಹಿತ ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

‘ಗಣಿತೋತ್ಸವ’ - 2017

Posted: 29 Mar 2017 04:31 AM PDT


"ಪುರಾತನ ಕಾಲದಿಂದಲೇ ಗಣಿತ ಶಾಸ್ತ್ರದ ಕಡೆಗೆ ಭಾರತವು ಅನನ್ಯವಾದ ಕೊಡುಗೆಯನ್ನು ನೀಡಿದೆ. ಈ ನಿಟ್ಟಿನಲ್ಲಿ ಗಣಿತ ಶಾಸ್ತ್ರದ ಕಡೆಗೆ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸಲು ಶಾಲೆಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಚಟುವಟಿಕೆಗಳು ವಿದ್ಯಾರ್ಥಿಯ ಗಣಿತ ಕೌಶಲವನ್ನು ಹೆಚ್ಚಿಸುತ್ತವೆ" ಎಂದು ಕುಂಬಳೆ ಬಿ.ಆರ್.ಸಿ ಯ ರೋಜಾ ಟೀಚರ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ 'ಗಣಿತೋತ್ಸವ'ದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮ ಶಾಲೆಯ ಮುಖ್ಯೋಪಾಧ್ಯಾಯ ಸಿ.ಎಚ್ ವೆಂಕಟರಾಜ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಮತ್ತು ಕುಂಬಳೆ ಬಿ.ಆರ್.ಸಿಯ ಸೀಮಂತಿನಿ ಟೀಚರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಶಾಲಾ ಶಿಕ್ಷಕ ತಲೆಂಗಳ ಕೃಷ್ಣಪ್ರಸಾದ ಸ್ವಾಗತಿಸಿದರು. ಶಿಕ್ಷಕ ಅವಿನಾಶ ಕಾರಂತ ಎಂ. ವಂದಿಸಿದರು. ಹಿರಿಯ ಶಿಕ್ಷಕ ಎಚ್.ಶಿವಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಸ್ತು ಪ್ರದರ್ಶನ ಸಹಿತ ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
Previous Page Next Page Home